Saturday, April 16, 2016

ಮುಂಜಾನೆಯ ಸವಿ ೨....



ಕೆಲವೊಮ್ಮೆ ಮನಸ್ಸು ಕೇಳೊದಿಲ್ಲ.. ಆದರೆ ಒಂದು ವಿಷಯ ನಿಮ್ಮ ಮನಸ್ಸನ್ನು ನೀವು ಒತ್ತಾಸೆ ಮಾಡಿದಿರೋ ಪುಸಲಾಯಿಸಿದರೋ ಅದು ಖಂಡಿತಾ ನಿಮ್ಮ ಮಾತು ಕೇಳುತ್ತೆ ಅನುಮಾನವೇ ಬೇಡ..
ಮೊದಲನೇ ದಿನ ನೀವು ಎದ್ದು ಬಿಟ್ಟಿರಿ.. ಹೊರಗಡೆ ತಿರುಗಾಡಲೂ ಹೋದಿರಿ..
ಎರಡನೇ ದಿನ...?
ಮತ್ತೆ ಅದೆ ಮನಸ್ಸು ಹೇಳುತ್ತೆ ಇವತ್ತೊಂದು ದಿನ ಮಲಗಿ ಬಿಡೋಣ ಅಂತ...
ಆ ಮಾತು ಕೇಳಲು ಹೋದಿರೋ.... ಮುಗೀತು ಕಥೆ...
ಇನ್ನೊಂದು ವಿಷಯ ನಿಮಗೆ ನೆನಪಿರಲಿ...
ನಮ್ಮ ದೇಹಕ್ಕೆ  ನಿದ್ದೆ ಒಳ್ಳೆಯದು ಹೌದು... ಆದರೆ ಜಾಸ್ತಿ ನಿದ್ದೆ ಮಾಡೋದೂ ದೇಹಕ್ಕೆ ಒಳ್ಳೆಯದಲ್ಲ...
ಅನಾವಶ್ಯಕ ನಿದ್ದೆಯಿಂದ ನಾವು ಸೋಮಾರಿಗಳಾಗುವುದಲ್ಲದೇ, ಮೈ ಕೈ ನೋವೂ ಶುರುವಾಗುತ್ತೆ....

ನಿದ್ದೆ ಎಷ್ಟು ಬೇಕು ಅನ್ನೋದೂ ಒಂದು ಮುಖ್ಯ ವಾದ ವಾದದ ವಿಷಯವೇ...



ಈಗ ತಾನೇ ಹುಟ್ಟಿದ ಮಕ್ಕಳು ಯಾವಾಗಲೂ ನಿದ್ದೆಯಲ್ಲೇ ಇರುತ್ತವೆ ೧೬ ರಿಂದ ೧೮ ಘಟೆಗಳ ಕಾಲ...
ನಂತರ ಅವರವರ ಅವಶ್ಯ ಕಥೆಗಳಿಗನುಗುಣವಾಗಿ ಬದಲಾಗುತ್ತಲೇ ಇರುತ್ತದೆ,,
ಮಕ್ಕಳಿಗೆ ೧೨ ಗಂಟೆ ಬೇಕಾದರೆ ನಂತರ ಆರರಿಂದ ಎಂಟು ಗಂಟೆ ಸಾಕು
ಅಲ್ಲದೇ ಒಂದು ಸಂಸ್ಕ್ರತ ಶ್ಲೋಕವೂ ಇದೆ...
ಮೈಥುನ ನಿದ್ದೆ ಮತ್ತು ಆಹಾರ ಮನುಷ್ಯ ನಿಯಂತ್ರಣದಲ್ಲಿರುತ್ತೆ ಅಂತ...

ನಿದ್ದೆಯ ಜಡತ್ವ ತೊಲಗಿಸಲು  ಬೆಳಿಗ್ಗೆ ಹಾಸಿಗೆಯಿಂದೆದ್ದು ಮುಖಕ್ಕೆ ನೀರು ಸಿಂಪಡಿಸಿ ತೊಳೆದುಕೊಳ್ಳಿ, ತಣ್ಣೀರು ಮುಖಕ್ಕೆ ಬಿದ್ದರೆ ಸಕಲೇಂದ್ರಿಯಗಳೂ ಜಾಗೃತವಾಗುತ್ತವೆ ಅಂತ ಕೇಳಿರುತ್ತೀರಲ್ಲವೇ.
ಮನೆಯಲ್ಲಿಯೇ ಸ್ವಲ್ಪ ಹೊತ್ತು ಅಡ್ಡಾಡಿ...

ಯಾವುದೇ ಯಂತ್ರವನ್ನು ಸದಾ ಕಾರ್ಯಗತವನ್ನಾಗಿಸಿದರೆ ಅದರ ಆಯುಷ್ಯ ಹೆಚ್ಚುತ್ತೆ ಅಂತ ಗೊತ್ತಲ್ಲ.
ನಮ್ಮ ದೇಹವು ಹಾಗೇ ತಾನೇ...
ಎಷ್ಟು ಅದನ್ನು ಉಪಯೊಗಿಸುತ್ತಾ ಇರುತ್ತೀರೋ ಅಷ್ಟೇ ಅದೂ ಚೈತನ್ಯದಾಯಕವಾಗಿಯೇ ಇರುತ್ತದೆ....

ಪ್ರತೀ ಅಂಗಕ್ಕೂ ವ್ಯಾಯಾಮ ಅಗತ್ಯ..
ಅದಕ್ಕೇ ನೀವು ಮಾಡೊ ನಡಿಗೆ, ಓಟ ಅಥವಾ ಶೀಘ್ರ ನಡಿಗೆ ಎಲ್ಲವಲ್ಲೂ ನಮ್ಮ ಕೈ ಕಾಲು ಕುತ್ತಿಗೆ ಸೊಂಟ ಕೈ ಕಾಲು ಗಂಟು ಭುಜ ಎಲ್ಲವೂ ಚಲನೆಯಲ್ಲಿರಲಿ..
ಇನ್ನೊಂದು ಮುಖ್ಯವಾದ ಮಾತು...
ನಿಮ್ಮ ವಿಹಾರ  ಅರ್ಧವೋ ಒಂದು ಗಂಟೆಯೋ   ಎಲ್ಲೂ ನಿಲ್ಲದಿರಲಿ.. ವಿಶ್ರಾಂತಿ ಬೇಡ ಮಧ್ಯದಲ್ಲಿ...

ಕೆಲವರು ಹೇಳ್ತಾರೆ ನಾನು ಮನೆಯಲ್ಲಿಯೇ ಇಡೀ ದಿನ ಅತ್ತ ಇತ್ತ ತಿರುಗಾಡುತ್ತೇನಲ್ಲ ಅದು   ಎರಡು ಮೂರು ಕಿ ಮೀ ಆಗೇ ಆಗುತ್ತೆ ನನ್ನದು ಇದೇ ವ್ಯಾಯಾಮ. ಅಂತ . ಇಲ್ಲ ಇದನ್ನು ವ್ಯಾಯಾಮ ಅಂತ ನಿಮ್ಮ ದೇಹ ಸ್ವೀಕರಿಸೊದಿಲ್ಲ.
ನಮ್ಮ ದೇಹದ ವ್ಯಾಯಾಮ ಅಂತ ದಿನಾ ಅದೇ ಸಮಯದಲ್ಲಿ ಅಷ್ಟೇ ಹೊತ್ತು ನೀವು ಏನು ಮಾಡುತ್ತೀರೋ ನೃತ್ಯ, ಓಟ, ಸೈಕ್ಲಿಂಗ್, ಈಜು ಆಟ, ಇವೆಲ್ಲವೂ ವ್ಯಾಯಾಮವೇ .
ನಿಜವಾಗಿ ಹೇಳಬೇಕೆಂದರೆ ವಾರಕ್ಕೆ ಮೂರು ದಿನ ದಿನ ಬಿಟ್ಟು ದಿನ ಅರ್ಧ ಗಂಟೆ ಹೊತ್ತು ಬ್ರಿಸ್ಕ್ ವಾಕಿಂಗ್ / ಓಟ ಧೀರ್ಘ ನಡಿಗೆ ಮಾಡಿದರೂ ಸಾಕು.

ಬೆಳಿಗ್ಗೆಯೇ ಯಾಕೆ ನಡುಗೆ ಮಾಡಬೇಕು ಎನ್ನುವುದು ನಿಮಗೆ ಗೊತ್ತಲ್ಲ.. ಈಗಿನ ಜನ ವಾಹನ ನಿಬಿಡ ಜಾಗದಲ್ಲಿ ಹಗಲು ಹೊತ್ತು ಇಡೀ ವಾತಾವತರಣವೇ ಮಲಿನವಾಗಿರುತ್ತೆ, ಹಾಗಾಗಿ ಬೆಳಗಿನ ಹೊತ್ತು ವಾತಾವರಣದಲ್ಲಿ ಆಮ್ಲಜನಕ ಜಾಸ್ತೀನೇ ಇರತ್ತೆ, ಬೆಳಗಿನ ಸೂರ್ಯ ರಶ್ಮಿ  ಕೂಡಾ ನಮ್ಮ ದೇಹಕ್ಕೆ ಒಳ್ಳೆಯದೇ ಅಂತಾರೆ ವೈದ್ಯರುಗಳು.

ಈ ನಡುಗೆಯಿಂದ ನಮ್ಮ ದೇಹದಲ್ಲಾಗುವ ಮಾರ್ಪಾಡುಗಳ ಬಗ್ಗೆ ಮುಂದೆ ಚರ್ಚಿಸೋಣ.

No comments:

Post a Comment