Friday, April 15, 2016

ಮುಂಜಾನೆಯ ಸವಿ.....೧



ಬೆಳಿಗ್ಗೆ ಬೇಗ ಏಳಬೇಕು ಎದ್ದು ಬೇರೆಯವರ ಹಾಗೆ ನಾನೂ ವ್ಯಾಯಾಮ ಮಾಡಬೇಕು ಯೋಗಾ ಮಾಡಬೇಕು, ಬೆಳಿಗ್ಗೆ ಬೆಳಿಗ್ಗೆ ವಾಯು ವಿಹಾರ ಮಾಡಬೇಕು ಅನ್ನಿಸುವುದಿದೆ ಎಲ್ಲರಿಗೂ.
ಆದರೆ ಬೆಳಿಗ್ಗೆ ಬೇಗ ಏಳಬೇಕಲ್ಲ, ಬೆಳಗಿನ ಆ ಸವಿಸವಿ ಸುಖ ನಿದ್ದೆ ಬಿಡ ಬೇಕಲ್ಲ ಅನ್ನೋದು ಒಂದು ದೊಡ್ಡ ಪಿಡುಗು.



ನೀವು ಮಾಡಬೇಕಾದುದು ಇಷ್ಟೆ..
ರಾತ್ರೆ ಸ್ವಲ್ಪ ಬೇಗ ಮಲಗಿಕೊಳ್ಳಿ. ಮಲಗುವ ಮೊದಲು ನಾಳೆ ನಾನು ಶತಾಯ ಗತಾಯ ಬೆಳಿಗ್ಗೆ ಬೇಗ ಏಳಲೇ ಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಿ.
ಬೆಳಿಗ್ಗೆ ಎಷ್ಟು ಗಂಟೆಗೆ ಏಳಬೇಕೋ ಅಷ್ಟಕ್ಕೆ ಅಲಾರಾಮ್ ಇಟ್ಟುಕೊಳ್ಳಿ.
ಅಂದರೆ ಐದಕ್ಕೆ ಏಳಬೇಕಾದರೆ ನಾಲ್ಕೂವರೆಗೆ ಒಂದು ನಾಲ್ಕೂ ನಲವತ್ತಕ್ಕೆ ಇನ್ನೊಂದು ನಾಲ್ಕೂ ಐವತ್ತಕ್ಕೆ ಮತ್ತೊಂದು.
ಏಳಲು ನಿಮ್ಮ ಮನಸ್ಸು ಕೇಳೋದೆ ಇಲ್ಲ,
ಅದಕ್ಕೂ ಒಂದು ಉಪಾಯ ಇದೆ,
ಮನಸ್ಸಿಗೆ ಹೇಳಿಕೊಳ್ಳಿ ಇವತ್ತೊಂದು ದಿನ ಮಾತ್ರ..ಅಂತ
ನಾಲ್ಕೂ ಐವತ್ತಕ್ಕೆ ಎದ್ದು ಹಾಸಿಗೆ ಬಿಟ್ಟು ಮುಖಕ್ಕೆ ನೀರು ಹಾಕಿಕೊಳ್ಳಿ, ನೀರು ಮುಖಕ್ಕೆ ಬಿದ್ದ ಕೂಡಲೆ ಮೈ ಮನ ಎಚ್ಚರಾಗುತ್ವೆ.
ಕನ್ನಡಿಯ ಮುಂದೆ ನಿಂತು ಹೇಳಿಕೊಳ್ಳಿ..
ಬೇರೆಯವರೆಲ್ಲಾ ಮಲಗಿದ್ದರೆ ನಾನು ಮಾತ್ರ ಎದ್ದು ವ್ಯಾಯಾಮ ಮಾಡುತ್ತಿದ್ದೇನೆ ನಾನು ಗ್ರೇಟ್ ಅಂತ ಅಂದುಕೊಳ್ಳಿ..
ವೈದ್ಯರ ಬಳಿ ಹೋಗದೇ ಇರಬಹುದಾದ ಉಪಯುಕ್ತ ಸಲಹೆ ಯಾರಾದರೂ ನಿಮಗೆ ಕೊಡುತ್ತೀರಾದರೆ ಅದನ್ನುನೀವು ತೆಗೆದುಕೊಳ್ಳಲೇ ಬೇಕಲ್ಲವಾ..?
ಅದು ಇದೇ....
ನಿಮ್ಮ ದೇಹ ದಂಡಿಸುವುದು.
ಅಂದರೆ ನೀವು ತಿನ್ನುವಷ್ಟೂ ಕರಗಿಸಿಕೊಳ್ಳಲೇಬೇಕು.
ಹಿಂದೆಯಾದರೆ ಅಷ್ಟು ಕೆಲಸ ಮಾಡುತ್ತಿದ್ದರು, ನಡೆಯುವದು, ಭಾರ ಎತ್ತುವುದು , ಅರೆಯುವುದು ನೀರು ಸೇದುವುದು , ಆದರೆ ಈಗ....
ಸವಲತ್ತು ಜಾಸ್ತಿಯಾಗಿ ಅವೆಲ್ಲಾ ಮರೆತು ಹೋಗಿದೆಯಲ್ಲ...
ಮತ್ತೊಂದು ಸಲಹೆ ಎಂದರೆ ರಾತ್ರೆಯ ಆಹಾರ ಆದಷ್ಟೂ ಕಡಿಮೆ ಮಾಡಿ, ಹಣ್ಣು ಧಾರಾಳ ಇರಲಿ, ಆದರೆ ಸೇಬು ಬೇಡ...
ನಾನೊಬ್ಬನೇ/ ಳೆ ಇದನ್ನು ಮಾಡಬೇಕಲ್ಲ ಅನ್ನೋದಕ್ಕಿಂತ. ನಾನೊಬ್ಬನೇ/ ಳೇ ಇದನ್ನ ಮಾಡ್ತೀನಲ್ಲ, ಬೇರೆಯವರ ಹಾಗೆ ಸೋಂಭೇರಿ ಅಲ್ಲ ನಾನು , ನನ್ನ ದೇಹಕ್ಕೆ ಬೇಕಾದ ವ್ಯಾಯಾಮ ನಾನು ಮಾಡ್ತಿದ್ದೇನೆ, ಇದರಿಂದ ನನಗೆ ಒಳ್ಳೆಯದಾಗ್ತದೆ ಅನ್ನೋ ನಂಬಿಕೆ ಮುಖ್ಯ. ೨೧ ದಿನ ದ ವರ್ತುಲ ಅಂತಾರೆ. ಯಾವುದೆ ವಿಶಯ ಅಭ್ಯಾಸವನ್ನು ನಾವು ನಿಯಮಿತವಾಗಿ ೨೧ ದಿನ ಮಾಡಿದರೆ ನಮ್ಮ ದೇಹ ಅದನ್ನು ಸ್ವೀಕರಿಸುತ್ತದೆ. ಅದೇ ನಮ್ಮ ದೈನಂದಿನ ದಿನಚರಿಯಂತೆ.. ಬರೇ ೨೧ ದಿನ ಮಾಡೋದು ನೋಡಿ ತದ ನಂತರ ನಿಮ್ಮ ದೇಹವೇ ನಿಮಗೆ ತಿಳಿಸುತ್ತದೆ , ಇದು ಬೇಕು ಅಂತ.. ಸರೀನಾ..?
ಒಮ್ಮೆ ನೀವು ಬೆಳಿಗ್ಗೆ ಎದ್ದು ಹೊರ ಹೊರಟು ಪ್ರಕೃತಿಯಲ್ಲೊಮ್ಮೆ ತಿರುಗಾಡಿ ನೋಡಿ, ಆಗ ನಿಮಗೆ ಅರಿವಾದೀತು ಬೆಳಗನ್ನು ಸವಿಯಲು ಅದೆಷ್ಟು ಪುಣ್ಯ ಮಾಡಿರಬೇಕು ಅಂತ.
ನಾಳೆಯಿಂದಲೇ ಆರಂಭ ಮಾಡಿರಲ್ಲ.....
ಬೆಸ್ಟ್ ಆಫ್ ಲಕ್.....












No comments:

Post a Comment