Friday, April 3, 2015

ಬೆಳಕಿನೆಡೆ ೨ ಭಗವಂತನ ಸೃಷ್ಟಿ



ಒಬ್ಬ ಗುರುಗಳು ತನ್ನ ವಿಧಾರ್ಥಿಗಳನ್ನು ಕೇಳಿದರು.
ಈ ಪ್ರಪಂಚ ಮತ್ತು ಜೀವಿಗಳೆಲ್ಲವೂ ಭಗವಂತನ ಸೃಷ್ಟಿಯೇ..?
ವಿಧ್ಯಾರ್ಥಿಗಳು ಹೌದೆಂದರು.
ಈ ಬಾರಿ ಗುರುಗಳು ಪುನಃ ಕೇಳಿದರು ಹಾಗಾದರೆ ಈ ದುಷ್ಟ ಶಕ್ತಿಗಳನ್ನು ಕೂಡ ಭಗವಂತನ ಸೃಷ್ಟಿಸಿದನೇ..?
ಈ ಬಾರಿ ಮಕ್ಕಳೆಲ್ಲರೂ ಮೌನದಿಂದಿದ್ದರು.

ಆಗ ಒಬ್ಬ ವಿದ್ಯಾರ್ಥಿ ತಾನು ಒಂದು ಪ್ರ್ರಶ್ನೆ ಕೇಳಬಹುದೇ ಎಂದು ಕೇಳಿದ
ಗುರುಗಳು ಒಪ್ಪಿಗೆ ನೀಡಿದರು.
ಆಗ ವಿದ್ಯಾರ್ಥಿ ಕೇಳಿದ ಶೀತಲತೆ ಪ್ರಪಂಚದಲ್ಲಿದೆಯಾ..?
ಪ್ರೊಫೆಸರ್ ಹೌದೆಂದರು ಯಾಕೆಂದರೆ ಶೀತಲತೆ ನಮ್ಮೆಲ್ಲರ ಅನುಭವಕ್ಕೆ ಬರುತ್ತದಲ್ಲವೇ.. ಕೇಳಿದರು.
ಆಗ ಆ ವಿದ್ಯಾರ್ಥಿಯೆಂದ ಇಲ್ಲ ಸರ್ ಶೀತಲತೆ ಎಂಬುದಿಲ್ಲವೇ ಇಲ್ಲ, ಅದು ಬಿಸಿ ಇಲ್ಲದಾಗ ನಮ್ಮ ಅನುಭವಕ್ಕೆ ಬರುತ್ತದೆ ಅಷ್ಟೆ .
ಯಾಕೆಂದರೆ ಶೀತಲತೆ ಎಂಬುದು ಬಿಸಿ ಅಥವಾ ಉಷ್ಣ ಇಲ್ಲದಿರುವಾಗಿನ ಸ್ಥಿತಿಯಷ್ಟೇ.
ಇನ್ನೊಂದು ಮಾತು ಸರ್ ಕತ್ತಲೆ ಎಂಬುದು ಇದೆಯೇ..?
ಈ ಬಾರಿ ಪುನಃ ಪ್ರೊಫೆಸರ್ ಎಂದರು ಹೌದು
ಪುನಃ ವಿದ್ಯಾರ್ಥಿಯೆಂದ ಕ್ಷಮಿಸಿ ಸರ್ ಇದೂ ಸಹಾ ತಪ್ಪು ಉತ್ತರ .
ಜಗತ್ತಿನಲ್ಲಿ ಕತ್ತಲೆ ಎಂಬುದಿಲ್ಲವೇ ಇಲ್ಲ. ಅದು ಬೆಳಕು ಇಲ್ಲದಾಗಿನ ಸ್ಥಿತಿಯಷ್ಟೇ.
ನಾವು ಉಷ್ಣ ಮತ್ತು ಬೆಳಕು ಎಂಬವುಗಳನ್ನು ಕಲಿಯುತ್ತೇವೆ ಅಷ್ಟೆ. ಆದರೆ ಕತ್ತಲೆ ಮತ್ತು ಶೀತ ಅಲ್ಲ.
ಹಾಗೆಯೇ ದುಷ್ಟ ಶಕ್ತಿ ಎಂಬುದಿಲ್ಲವೇ ಇಲ್ಲ ಸರ್ ದೇವರು ಸೃಷ್ಟಿ ಮಾಡಿದ್ದು ಪ್ರೀತಿ ಶೃದ್ಧೆ ಮತ್ತು ದೇವರೆಡೆಗಿನ ಪರಿಪೂರ್ಣ ನಂಬಿಕೆ ಮಾತ್ರ.
ಉಳಿದುದ್ದೆಲ್ಲಾ ನಮ್ಮ ನಮ್ಮ ಭಾವನೆಗಳಷ್ಟೆ..
ಎಷ್ಟು ನಿಜ ಅಲ್ಲವೇ ಸ್ನೇಹಿತರೇ ನಮ್ಮೆಲ್ಲರ ಮನ ಮುಟ್ಟುವ ಬುದ್ದಿ ಬಡಿದೆಬ್ಬಿಸೋ ಈ ಮಾತುಗಳು ಯಾರವು ಅಂತ ಗೊತ್ತೇ..?
ಈ ವಿಧ್ಯಾರ್ಥಿಯ ಹೆಸರೇ ಸ್ವಾಮಿ ವಿವೇಕಾನಂದ...
ಇದು ನಡೆದದ್ದು ೧೯೦೨..ರಲ್ಲಿ


1 comment:

  1. ನರೇಂದ್ರ ಬಾಲ್ಯದಲ್ಲೇ ಪರಿಪೂರ್ಣತೆಯತ್ತ ಅಡಿ ಇಟ್ಟ ವಿವೇಕಾನಂದ.

    ReplyDelete