Sunday, June 24, 2012



ಅಭ್ಯಾಸದ ೨೪ ನೆಯ ಕಕ್ಷೆ ಮತ್ತು ಸನ್ಮಾನ್ಯ ಎಚ್ ಎಸ್ವೀಯವರ ಹುಟ್ಟುಹಬ್ಬದ ಸಡಗರ

ಸಮಯ ಬೇಗನೇ ಕಳೆದು ಬಿಡುತ್ತದೆ ಅನ್ನಿಸುತ್ತದೆ.ಯಾಕೆಂದರೆ ಮೊನ್ನೆ ಮೊನ್ನೆ ಶುರುವಾದ ನಮ್ಮ ಅಭ್ಯಾಸದ ಹಾದಿ ಎರಡನೆಯ ಸಂವತ್ಸರದ್ನ್ನ ಗಡಿಯನ್ನೂ ದಾಟಿ ಬಿಟ್ಟಿತು.

ಈ ಸಾರಿಯ ಹೆಚ್ಚು ಸವಿ ಮಾಸ್ತರಾದ ಎಚ್ ಎಸ್ವೀ ಯವರ ಹುಟ್ಟು ಹಬ್ಬವೂ ನಗರದ ಸದ್ದು ಗದ್ದಲವಿಲ್ಲದೇ ಸರಳವಾಗಿ ಆದರೆ ಪ್ರೀತಿ ಕಕ್ಕುಲತೆ ಅಕ್ಕರಾಸ್ತೆ ಅಪ್ಯಾಯತೆ ಮತ್ತು ಸಡಗರದಲ್ಲಿ ಕಳೆಯಿತು.

ಈ ಸಾರಿಯ ಅಭ್ಯಾಸವೂ ವಿಶಿಷ್ಟ ರೀತಿಯಲ್ಲೇ ನಡೆಯಿತು. ನಮ್ಮ ಅಭ್ಯಾಸದ ನಿರ್ವಾಹಕ ಶ್ರೀಯುತ ರಾಜಶೇಖರ ರವರ ಸುಂದರ ವಿಶಿಷ್ಟ ಮುನ್ನುಡಿಯೊಂದಿಗೆ ಆರಂಭವಾಯ್ತು. ಕುಮಾರಿ ಸ್ಪರ್ಷ ಸುಶ್ರಾವ್ಯವಾಗಿ ಗುರುಗಳ ಹುಚ್ಚುಖೋದಿ ಮನಸ್ಸು, ಲೋಕದ ಕಣ್ಣಿಗೆ, ನೀಲ ಮೇಘ ಶ್ಯಾಮ, ಇಷ್ಟು ಕಾಲ ಒಟ್ಟಿಗಿದ್ದು ಹಾಡಿ ಎಚ್ ಎಸ್ವೀಯವರ ಅದ್ವಿತೀಯ ಸಾಹಿತ್ಯ ಲೋಕಕ್ಕೇ ಕೊಂಡೊಯ್ಯಿತು.

 ಗುರುಗಳಾದ ಶ್ರೀಯುತ ಟಿ ಪಿ ಅಶೋಕರು, ನರಹಳ್ಳಿಯವರು, ಮತ್ತು ನಮ್ಮ ಬರ್ತ್ ಡೇ ಬಾಯ್ ಜತೆಯಲ್ಲೇ ಕುಳಿತಿದ್ದರೆ ನಮಗೆಲ್ಲಾ ಸಂಭ್ರಮ.

ಗುರುಗಳಿಗೆ ಅವರ ಮೊಮ್ಮಕ್ಕಳ ಪ್ರೀತಿಯ ಕಾಣಿಕೆ ಸರ್ವರ  ಮನ ಸೆಳೆದರೆ ಅಭ್ಯಾಸಿಗರಾದ ಶ್ರೀಮತಿ ಎಮ್ ಆರ್ ಕಮಲ, ಶ್ರೀಯುತ ನಾಗರಾಜ ವಸ್ತಾರೆ, ಶ್ರೀಯುತ ದತ್ತಾತ್ರಿ,ಶ್ರೀಯುತ ರುದ್ರೇಶ್ವರ ಸ್ವಾಮಿ, ಶ್ರೀಯುತ ಡಿ ಎಸ್ ರಾಮಸ್ವಾಮಿ, ಮುಂತಾದ ಪ್ರಮುಖರು ಎಚ್ ಎಸ್ವೀಯವರ ತಮ್ಮ ತಮ್ಮ ಅಂತಃಕರಣವರಳಿಸಿದ ಕವಿತೆಗಳನ್ನು ಓದಿ ಕ್ರತಾರ್ಥರಾದರು.

ಮಾನ್ಯ ಟಿ ಪಿ ಅಶೋಕರು ಗುರುಗಳ ಕನ್ನಡಿಯ ಸೂರ್ಯನ ವಿಮರ್ಶಿಸಿದರೆ ತಮ್ಮ ವಿಶಿಷ್ಟ ಆಕರ್ಷಕ ಮಾತುಗಾರಿಕೆಯ ವಿಮರ್ಶಕ ನರಹಳ್ಳಿಯವರು ತಮ್ಮ ಹಾಗೂ ಎಚ್ ಎಸ್ವೀಯವರ ಗೆಳೆತನದ ಸಾಂದ್ರತೆ ಬದುಕಿನ ನಾಲ್ಕು ದಶಕಗಳ ಸುಧೀರ್ಘ ರಹದಾರಿಯ ವಿಷಾದ ವಿನೋದಗಳ ರಸಘಟ್ಟಗಳನ್ನು ತೇಲಿಬಿಟ್ಟರು.

ಶ್ರೀಯುತ ಬಿ ಆರ್ ಲಕ್ಷ್ಮಣ ರಾಯರೂ,ಡಾ ಶಿವರುದ್ರಪ್ಪನವರೂ,  ಶ್ರೀಯುತ ಶಂಕರ ಶಾನುಭಾಗರು, ಶ್ರೀಯುತ ಉಪಾಸನಾ ಮೋಹನ್ ರವರೂ ತಮ್ಮ ಪ್ರೀತಿಯ ಸಂಭಂಧಗಳ ಸಾಕ್ಷಿಯಾದರು.

ಈ ಸಾರಿಯ ಹುಟ್ಟುಹಬ್ಬದ ವಿಶೇಷವೆಂದರೆ "ಶ್ರೀಮತಿ ರಾಜಲಕ್ಷ್ಮಿಯವರ ನೆನಪಿನಲ್ಲಿ ಅವರ ಮಕ್ಕಳು ಕಟ್ಟಿಸಿದ ರಾಜಲಕ್ಷ್ಮಿ ಕಲಾವೇದಿಕೆ" ಯ ಉದ್ಘಾಟಣೆಯಾಗಿದ್ದುದು..




ನಿಮಗಾಗಿ ನಿನ್ನೆಯ ರಸ ನಿಮಿಷಗಳ ದೃಶ್ಯ ತುಣುಕುಗಳು: