Sunday, January 29, 2012



ತ್ಯಾಂಪ ಸೀನನ ಕಂಪೂಟರ್ ಕಲಿಕೆ   2

ಅಯ್ಯೋ ದೇವರೇ.......
ಏನು ಮಾಡಿ ಬಿಟ್ಟಿರಿ ಅನ್ನೋ ಜ್ಞಾನ ಇದೆಯಾ ನಿಮಗೆ ನನ್ನ ಸ್ವರ ಜೋರಾಗಿತ್ತಾ...?
"ಎಂತ ಆಯಿಲ್ಲ್ಯಾ... ತ್ಯಾಂಪ ಈಗ ಸರಿ ಮಾಡ್ತ ಕಾಣ್ ಬೇಕಾದ್ರೆ..." ಇದು ಸೀನನ ಸ್ವರ.
ಬೇಡ   ಬೇಡವೇ ಬೇಡ, ನೀವಿಬ್ಬರೂ  ಮುಟ್ಟಬೇಡಿ ... ಕಂಪೂಟರ್ , ಈಗ ಮಾಡದ್ದೇ ಸಾಕ್ ಬಿಡಿ. ಅಂದೆ ಸ್ವಲ್ಪ ಬೇಸರದಲ್ಲಿ.
ಕೂಲ್ ಕೂಲ್... ಗೋಪಿ ಕೂಲ್....
ನನ್ನನ್ನ ನಾನೇ ಸಂತೈಸಿಕೊಂಡೆ, ಮನಸ್ಸು ಗಲಿಬಿಲಿಗೊಂಡಾಗ ನಾನು ಸಾಧಾರಣವಾಗಿ ಇದನ್ನೇ ಮಾಡುವುದು,
ನಾಲ್ಕಾರು ಧೀರ್ಘ ಶ್ವಾಸ ತೆಗೆದುಕೊಂಡೆ. ನಂತರ ಯೋಚಿಸ ತೊಡಗಿದೆ.
ಪಿ ಕ್ಯೂ ಆರ್ ಬದಲಿಗೆ ೬,೩,೭,೮ ಈ ನಾಲ್ಕೇ ಅಂಕೆಗಳು ಬದಲಾಗಿ ಅಕ್ಷರಗಳಾಗಿವೆ. ಅಷ್ಟೇ....ಏನಾಯ್ತೀಗ ಅದನ್ನು ಬದಲಾಯಿಸಿದರೆ ಸಾಕು...
ಅದು ಅನಿಜವಾಗಿಯೂ ಅಷ್ಟೇನಾ....?? ಕಡಿಮೆ ಪಕ್ಷ ಒಂದು ಪುಟದಲ್ಲಿ ಬದಲಾಯಿಸ ಬೇಕಾದ ಅಂಕೆಗಳು ಕೇವಲ ಐವತ್ತು ಇದ್ದರೂ ಸರಿಯಾದ ಕ್ರಮದಲ್ಲಿ ಇಡಬೇಕಾದರೆ ೧೬ * ೫೦ *೪ ಸಾರಿ .... ಅಬ್ಬಾ
ಕಲ್ಲೂರಾಮ್ ನನ್ನ ಕೊಂದು ಹಾಕಿಯಾನು..... ಅಲ್ಲ ಇವರ ಜತೆ ನನಗೂ  ಟಿಕೆಟ್ಟೇ
ಅಷ್ಟರಲ್ಲೇ ನಕ್ಷತ್ರಿಕ ಚಂದ್ರೂ ಬಂದ. ಸಾರ್ ಬಾಸ್ ಬಿಸೀಲವ್ರೆ, ( ಸಿಟ್ಟು)
ನನ್ನ ಸಂಕಟ ಕೇಳುವರ್ಯಾರು..? 
"ಅವರಿಗೆ ಒಂದು ಗ್ಲಾಸ್ ತಣ್ಣಗಿನ ನೀರು ಕೊಟ್ಟು ಬಾ"
"ಅಲ್ಲ ನೀವು ಬರಬೇಕಂತೆ, ಈಗಲೇ....".
"ಚಂದ್ರೂ ಅವರಿಗೆ ಹೇಳು ಕಂಪ್ಯೂಟರ್ ಹ್ಯಾಂಗಾಗಿದೆ ಅಂತ."
"ನಂಗೇನ್ ಗೊತ್ತು ಕಂಪ್ಯೂಟರ್ ಹ್ಯಾಗ್ ಆಗಿದೆ ಅಂತ. ತಮಾಶಿ ಮಾಡ್ತಾ ಇದ್ದೀರಾ...? ನಿಜವಾಗಿಯೂ ನನಗೆ ಗೊತ್ತಿಲ್ಲ." ಚಂದ್ರೂ
"ಅಲ್ಲ ಮರ್ರಯಾ ಅವ್ರಿಗೆ ಅರ್ಥ ಆಗತ್ತೆ ನಾನ್ ಹೇಳಿದ ಹಾಗೆ ಹೇಳು.ಹೋಗು"
ಅಂದರೆ ನನ್ನಈ ರಿಪೋರ್ಟಿನ ಸಾರಾಂಶದ ಮುಖ್ಯ ಪೇಜಿನಲ್ಲಿ ಮಾತ್ರ ಈ ಅಕ್ಷರಗಳನ್ನು ಅಂಕೆಗಳಾಗಿ ಸರಿ ಪಡಿಸಿಕೊಂಡು ನೋಡಬಹುದಾ..?
ಯಾಕೆಂದರೆ ಮೊತ್ತ ವೂ ಅದಕ್ಕನುಗುಣವಾಗಿ ಬದಲಾಗುತ್ತದಲ್ಲ....  ಮೊದಲೇ ಇದರ ಒಂದಾದರೂ ಪ್ರತಿ ತೆಗೆದಿರಿಸದಿದ್ದುದ್ದಕ್ಕೆ ನನ್ನನ್ನು ನಾನೇ ಶಪಿಸಿಕೊಂಡೆ. ಆದರೂ ಈಗ ಏನು ಮಾಡಲಾದೀತು...? ಚಂದ್ರೂ ಒಂದು ಸ್ಟ್ರೋಂಗ್ ಕಾಫಿ ....
ಮತ್ತೆ ನಮಗೆ...? ಕೋರಸ್!!!
ಕೂಲ್ ಕೂಲ್.....
ಚಂದ್ರೂ ಮೂರು.. ಕಾಫಿ
ಈಗಂತೂ ಹೈದ್ರಾಬಾದ್ ನಿಂದ ಬಂಡ್ರಿಯವರನ್ನು ಕರೆಸ ಬೇಕಾ, ಅಥವಾ ಪ್ರಸನ್ನ ಶಂಕರ ಪುರ ಅವರನ್ನೋ, ಅಥವಾ ರವಿಯವರನ್ನ, ಹೋಗಲಿ ಪ್ರಸಾದ್  ನನಗೇ ಬಂತು.
ಎಲ್ಲಿ ಕಳೆದಿದೆಯೋ ಅಲ್ಲೇ ಹುಡುಕಬೇಕಂತೆ. ಈ ಮಾತು ಯಾಕೆ ನೆನಪಿಗೆ ಬಂತು ಈಗ...??
ಅಲ್ಲ ಎಲ್ಲಾ ಡಿಲೀಟ್ ಮಾಡಿ ಪುನಃ ಶುರು ಹಚ್ಚಿ ಕೊಳ್ಳಲಾ.... ಇಲ್ಲ ಪುನಃ ಮಾಡಲು ಇದಕ್ಕೆ ಕಡಿಮೆ ಎಂದರೂ ಮೂರ್ನಾಲ್ಕು ದಿನ ಬೇಕೇ ಬೇಕು. ಸಾಧ್ಯವೇ ಇಲ್ಲ. ನನ್ನ ಅಷ್ಟು ದಿನದ ಶ್ರಮ ಈ ರೀತಿಯಲ್ಲಿ ... ಛೇ...
ಏನನ್ನಲಿ..? ಇವರಿಗೆ ...........ಇಲ್ಲ ನಿಜವಾಗಿಯೂ ಗೊತ್ತಿಲ್ಲ ಇವನಿಗೆ ತಾನೇನು ಮಾಡಿದ್ದೇನೆ ಅಂತ, ಪಾಪ.          ಆ ಸ್ಥಿತಿಯಲ್ಲೂ ನಗು ಬಂತು ಪಾಪ ಅವನಾ..ನಾನಾ ?
ಗೋಪೂ ಇದು ಬಿಡು ತ್ಯಾಂಪನನ್ನು ಎರಡು ಮೂರು ಶಾಲೆಯವರು ಕೈಮುಗಿದು ನೀವಿನ್ನು ಬರುವುದೇ ಬೇಡ ಇಲ್ಲಿಗೆ... ಅಂತ    ಕಳುಹಿಸಿದ್ದಾರೆ ಗೊತ್ತಾ...?
ಕೇಳಲೇ ಬೇಕು ..........ಕೇಳದಿದ್ದರೆ ಇವನು ಬಿಡುವುದೇ ಇಲ್ಲ...ಅದು ಸೀನನ ಶೈಲಿ
ಹೌದಾ ಏನಾಯ್ತು ಎಲ್ಲಾ ಅಷ್ಟು ಬೇಗ ಕಲಿತನಂತಾ... ಅಲ್ಲಲ್ಲ
ಏನು ಮಾಡುತ್ತಾನೋ ಗೊತ್ತಿಲ್ಲ ಇವನು ಕುಳಿತ ಸ್ವಲ್ಪ ಸಮಯದಲ್ಲೇ ಇವನ ಕಂಪ್ಯೂಟರ್ ಖಾಲಿಯಾಗಿ ಬಿಡುತ್ತದೆ...
ಅಂದರೆ ...?
ಅದರ ಪರದೆಯಲ್ಲೇ ಏನೂ ಇರಲ್ಲ..ಎಲ್ಲಾ ಖಾಲಿ....
ಪುಣ್ಯಾತ್ಮ ರಾಮ ಮೋಹನರು ಹೇಳಿದ ಹಾಗೆ "ಫಾರಮಾಟ್" ಮಾಡಲಾ  ಅಂದರೆ ಎಸ್ ಅಂತ ಬಟನ್ ಒತ್ತುತ್ತಾನೋ ಏನೋ..? ಇಡೀ ಕಂಫ್ಯೂಟರ್ ಫಾರ್ಮಾಟ್  ಎಸ್ ಅಂತ ಒತ್ತಿದ್ದಾಗ ನೋಡ ನೋಡುತ್ತಿದ್ದಂತೆಯೇ ಎಲ್ಲಾ ಫೈಲುಗಳೂ ಮಾಯವಾಗುತ್ತಾ ಇದ್ದು  ಕೊನೆಗೆ ಸಿಸ್ಟಮ್ಮೂ ಕೂಡಾ ಮಾಯವಾಗಿ  ....................................ಆ ಸ್ಥಿತಿಯಲ್ಲೂ ನಗು ಬಂತು. ನನ್ನ ಸ್ಥಿತಿಗಿಂತಲೂ ಅಧ್ವಾನ ಆ  ಸ್ಕೂಲ್ ನವರ  ಕಥೆ.
ಇವನು ಹೀಗೆ ಪ್ರತಿ ಕಂಪ್ಯೂಟರ್ ಅನ್ನೂ ದಿನಾ ಫಾರ್ಮಾಟ್   ಮಾಡುತ್ತಿದ್ದರೆ ಆ ಶಾಲೆಯವರೇನು ಮಾಡ ಬೇಕು ಪಾಪ, ಇವನನ್ನು ಹೊರಗಟ್ಟದೇ..
"ಕೊನೆಗೆ.......??"
ಈಗಿನ ಮಾಸ್ಟ್ರು ತುಂಬಾ ಒಳ್ಳೆಯವರು...
ಯಾಕೆ
ಅಲ್ಲ , ಹಾಗೆಲ್ಲಾ ಮಾಡಬೇಡಿ... ನಾನು ಬೇರೆ ಹೇಳಿಕೊಡುತ್ತೇನೆ ಎಂದರು.
ಅಲ್ಲಾ ಚಂದ್ರೂ ಎಲ್ಲಿ ಹಾಳಾಗಿ ಹೋದ... ಕಾಫಿ ಬರದೇ ನನ್ನ ತಲೆ ಓಡೋದೇ ಇಲ್ಲವಲ್ಲ.
ಮತ್ತೆ....
ಆಮೇಲೆ ಹೇಳಿದರು ಯಾವ ಫೈಲ್ ನೀವು ತಕೊಂಡರೂ ಅದನ್ನು ತೆರೆಯುವ ಮೊದಲು ಸೇವ್ ಆಸ್ ಅಂತ ಮಾಡಿ........
ನಾನೊಮ್ಮೆ ಜಿಗಿದೆ.....ನನಗೆ ನಂಬಿಕೆ ಬರುತ್ತಿಲ್ಲ............. ಏನೂ ಇನ್ನೊಮ್ಮೆ ಹೇಳೂ....
ಅದೇ "ಸೇವ್ ಆಸ್" ಮಾಡಿಕೊಂಡೇ ಮಾಡಿ ಅಂತ ಹೇಳಿದ್ದರು.
ಅಂದರೆ ನೀನು ತ್ಯಾಂಪ ಇದನ್ನು ಮುಟ್ಟುವ ಮೊದಲು ಹಾಗೆ ಮಾಡಿದ್ದೀರಾ...? ನನ್ನ ಸ್ವರದಲ್ಲಿ ನನಗೇ ನಂಬಿಕೆಯಿಲ್ಲ
ಹೌದು ಪ್ರತಿ ಸಾರಿಯೂ ಮಾಡ್ತೇನೆ ನಾನು.
ಎಲ್ಲಿದೆ ತೋರ್ಸು............ ಬೇಡ.......  ಮೇಲೆ ಫೈಲ್ ಹೆಸರು ನೋಡಿದೆ ಅದರಲ್ಲಿ  ಕೊನೆಯಲ್ಲಿ ಒಂದು ಅಂತ ಸೇರಿಸಿದ್ದ .........ಅಂದರೆ ನನ್ನ ಅಸಲೀ ಫೈಲ್ ಕಂಪ್ಯೂಟರ್ನಲ್ಲೇ ಇದೆ ಸೇಫಾಗಿ...
 ಫೈಲ್ ಓಪನ್ ಮಾಡಿದೆ ನಿಜ ನನ್ನ ಅಸಲೀ ಫೈಲ್ ಇಲ್ಲೇ ಇದೆ........... ನನಗೆ ನಂಬಿಕೆಯೇ ಬರುತ್ತಿಲ್ಲ
ಜೀವದಲ್ಲಿ ಜೀವ ಬಂತು ಆಗಲೇ ಚಂದ್ರೂ.... ..........ಮೂರು ಕಾಫಿ ಎಂದ ರಾಗವಾಗಿ.......
"ಅಲ್ಲ ಗೋಪು, ನಾನು ಇನ್ನೊಂದು ಕಲಿತಿದ್ದೇನೆ   ಗೊತ್ತಾ....? ಈ  ಶಿಫ್ಟ್ ಮತ್ತು ಮತ್ತು ಡಿಲೀಟ್ ಒಟ್ಟಿಗೇ ಒತ್ತಿದರೆ ಯಾವುದೇ ಫೈಲ್ ಕೂಡಾ ಕಸದ ಬುಟ್ಟಿ ( ರಿ ಸೈಕಲ್ ಬಿನ್ ) ಗೆ ಸಹಾ ಹೋಗದೇ ಮಾಯವಾಗಿಬಿಡುತ್ತೆ,  ಗೊತ್ತಾ ನಿನಗೆ ಇದು, ತೋರಿಸಲಾ.......?"  ತ್ಯಾಂಪ........
 " ಬ್ಯಾಡ............ ಬ್ಯಾಡ.......... ಏಯ್...."
ನಾನು ಕಾಫಿ ಕಪ್ ಎಸೆದು ಕಂಪ್ಯೂಟರ್ ಬಳಿ ಓಡಿದೆ......

No comments:

Post a Comment